
ಅವತ್ತು
ನಾನು ಬಿದ್ದ ಅಡಿಕೆ ಸುಲಿಯಿತ್ತಾ ಇದ್ದೆ. ಹಟ್ಟಿಯ ಕೆಲಸಕ್ಕಾಗಿ ತಯಾರು ಮಾಡಿ ಇರಿಸಿದ ಪಕ್ಕಾಸಿನ
ಕೆಳಗಿನಿಂದ ಬೆಕ್ಕಿನ ಮರಿಯ ಕೂಗು ಕೇಳಿಸಿತು.
ಕತ್ತಿಗೆ ಒಂದು ಅಡಿಕೆ ಸಿಕ್ಕಿಸಿ
ಪರಿಶೀಲಿಸಿದಾಗ ಒಂದು ಹೆಣ್ಣು ಬೆಕ್ಕಿನ
ಮರಿ, ನನ್ನನ್ನು ಕಂಡೊಡನೆ ಭಯಗೊಂಡು ಅಡಗಲು ಹವಣಿಸಿತು. ಅಮ್ಮನಿಗೆ ತಿಳಿಸಿದಾಗ, ತೋಟದಿಂದ ಹಿಂತಿರುಗಿ ಬರುವಾಗ ಅವರೊಡನೆ ಬಂತೆಂದು ಹೇಳಿದರು. ನಮ್ಮ ಮನೆಯಲ್ಲಿ ಬೆಕ್ಕಿನ
ಸಾಕಣಿಕೆ ಇಲ್ಲದೆ ದಶಕವೇ ಕಳೆದಿದೆ. ಒಂದು ಕಪ್ಪು-ಬಿಳಿ
ಮಂಗಲ ಹಿಂದೊಮ್ಮೆ ಇತ್ತು. ಯಾವಾಗ ಅದು ಚಿಕ್ಕಪ್ಪನ ಹಾಸಿಗೆಯಲ್ಲಿ
ಮಲ ವಿಸರ್ಜನೆ ಮಾಡಿತೋ ಅದೇ ಕೊನೆ. ಬಿದ್ದ
ಪೆಟ್ಟಿಗೆ ಇಂಚಿ ತರೆ ಪಾಡ್ತ್
ಕೂಡಾ ಮಲಗಲಿಲ್ಲ.
ಇದರ
ಬಣ್ಣ ಬಿಳಿಯ ಮೇಲೆ ಅರಶಿನ ಚೇಪಿದಂತೆ.
ದಿನೇ ದಿನೇ ಬೆಕ್ಕಿಗೆ ನಮ್ಮ
ವಾತಾವರಣ ಪರಿಚಯವಾಗತೊಡಗಿತು. ಎಲ್ಲರಿಗೂ ಅಚ್ಚು-ಮಚ್ಚು, ಸಮಯ ಕಳೆಯಲು, ದುಃಖ
ಮರೆಯಲು ಬೆಕ್ಕು ಒಂದು ಅದ್ಭುತ ಜೀವಿ,
ಮನೆಯುದ್ದಕ್ಕೂ ಓಡಾಡಿಕೊಂಡು, ಗೋಡೆಯ ಮೇಲಿನ ಹಲ್ಲಿಗಳನ್ನು ಹಿಡಿಯುತ್ತಾ ಎಂಕ್ಲೆಗ್ ಭಾರೀ ಉಪಕಾರ ಮಾಡುತ್ತಿತ್ತು.
ಇದರಿಂದ
ಅಷ್ಟೇ ಉಪದ್ರವೂ ಇದೆ. ನನ್ನ ಪೊಪ್ಪನ
ಸಮ್ಮಲೆ ಕಿದೂರು ಕಿಞ್ಞಣ ಅಳ್ಳರು ಹೇಳಿದ ಕಥೆ ನೆನಪಿಗೆ ಬರುತ್ತದೆ.
ಅವರ ಪರಿಚಯದ ಭಟ್ಟರ ಮನೆಯ ಅಟ್ಟದ ಮೇಲೆ
ಬೆಕ್ಕು ಮರಿಯಿಟ್ಟಿತ್ತು. ಒಂದು ದಿನ ರಾತ್ರಿ
ಬೆಕ್ಕು ಮರಿಗಳಿಗೆ ಆಟವಾಡಲು ವಿಷಜಂತೊಂದನ್ನು ತಂದಿದೆ. ಭಟ್ಟರು ಮತ್ತವರ ಮಕ್ಕಳು ಮಲಗುವ ಸರ್ತ ಮೇಲೆ ಮರಿಗಳು
ಇದ್ದದ್ದರಿಂದ ಅರೆಜೀವದ ವಿಷಜಂತು ಮಲಗಿದ್ದವರ ಚಾಪೆಯ ಮೇಲೆ ಬಿದ್ದು ಇಬ್ಬರು
ಮಕ್ಕಳಿಗೆ ಕಚ್ಚಿ, ಮಕ್ಕಳು ಸಾವನ್ನಪ್ಪಿದರಂತೆ!
ಬಂದಾಗ
ಮೆಟ್ರೆ - ಮೆಟ್ರೆ ನೋಡುತ್ತಿದ್ದ ಬೆಕ್ಕು, ಈಗ ಎರಡನೇ ಗರ್ಭದಾರಣೆ
ಮುಗಿಸಿದೆ. ಎರಡನೆಯ ಬಾರಿಯ ಮೂರು ಮರಿಗಳಲ್ಲಿ "ಒಂಜಿ
ಕಂಠೆ” ಎಂದು ಬಾಲಕೃಷ್ಣನ ಪ್ರಾಥಮಿಕ
ಪರಿಶೀಲನೆಯಲ್ಲಿ ತಿಳಿದು ಬಂದಿತು. ಆದರೆ ಈ ಮರಿಗಳಿಗೆ
ನಿಮೂರ್ತಿ ಆಗಬೇಕು. ಎಲ್ಲಿ ಬಿಡೋದು? ಅಂತ ಸಂಚು ರೂಪಿಸುತ್ತ
ಇರುವಾಗ, ನನ್ನ ತಮ್ಮ ಅವಸರ
ಮಾಡಿ ಎರಡು ಮರಿಗಳನ್ನು ಆಯಿರೆಯ
ಪೂಜಾರಿಯವರ ಮನೆಯ ಮುಂದೆ ಬಿಟ್ಟು
ಬಂದ. ಮೊದಲೇ ಕೋಳಿ ಮೊಟ್ಟೆಗಳನ್ನು ಕದ್ದು
ತಿನ್ನುತ್ತಿದ್ದ ಬೆಕ್ಕುಗಳ ಬಗ್ಗೆ ಮಂಡೆ ಬೆಚ್ಚ ಮಾಡಿಕೊಂಡಿದ್ದ
ಅವರಿಗೆ, ಇವೆರಡು ನಾಲಿಟ್ ಪತ್ತ್ ನಂಚನೆ ಆಗಿರಬೇಕು.
ಮರುದಿನವೇ
ಅವರ ಅಕ್ಕ ನನ್ನ ತಾಯಿಯ
ಬಳಿ ವಿಚಾರಿಸಿದರು. ಅದಕ್ಕೆ ಅವರು, 'ಬಾಲಕೃಷ್ಣ ಅವುಗಳ ನಿಮೂರ್ತಿಗೆ ಗುತ್ತಿಗೆ ಪಡೆದಿದ್ದು, ಗುತ್ತಿಗೆ ಹಣವನ್ನು ಪಡೆದು, ಮರಿಗಳನ್ನು ಜುಬೀರ್ ನ ಮೀನಿನ ಅಂಗಡಿಯ
ಬಳಿ ಬಿಡುವುದೆಂದು ಒಪ್ಪಿರುವುದಾಗಿ' ಹೇಳಿದರು. ಆದರೆ ಗುತ್ತಿಗೆಯ ಹಣವನ್ನು
ಕುಡಿದು ಮುಗಿಸಿ ನಿಮೂರ್ತಿಯನ್ನು ಭಾರೀ ಹತ್ತಿರ ಮಾಡಿರಬೇಕೆಂದು
ಹೇಳಿದರು. ಮರುದಿನ ನನ್ನ ದ್ವಿಚಕ್ರ ವಾಹನದ
ಆಸನದ ಮೇಲೆ ಪರಚಿದ ಗೆರೆಗಳನ್ನು
ಕಂಡೆ. ಇವಕ್ಕೆ ಉಗುರು ಪರಿ ಮಾಡಲು ಎನ್ನವೇ
ತಿಕೋಡಾ? ಎಂದು ಒಂತೆ ಕೋಪ
ಬಂತು. ಆದರೆ ಅಲ್ಲಿ ಎಲ್ಲೂ
ಅವುಗಳ ಪತ್ತೆಯೇ ಇರಲಿಲ್ಲ. ಕೆಲ ದಿನಗಳ ನಂತರ
ನೆಲ್ಲಿಗುಡ್ಡೆಯ ಕುಟ್ಟ ಮಾಮ ಹೈನದ ಮನೆಗೆ
ಹಾಲು ಕೊಟ್ಟು ಹಿಂತಿರುಗಿದವರೇ ಬುತ್ತಿ ಹಿಡಿದುಕೊಂಡು ಸೀದಾ ನಮ್ಮ ಇಲ್
ತಂಚಿ ಬಂದು "ನಿಕ್ ಲ್ನ ಪುಚ್ಚೆಲ್
ಓಲ್ಲ?” ಎಂದು ಕೇಳಿದಾಗ ಅಮ್ಮ
ಮತ್ತೆ ಅದೇ ಬಾಲಕೃಷ್ಣಣ್ಣನ ಕಥೆ
ಹೇಳಿದರು. ಈಗ ಆ ಬೆಕ್ಕಿನಮರಿಗಳು
ನೆಲ್ಲಿಗುಡ್ಡೆಯಲ್ಲಿ ಇದ್ದಾವಂತೆ! ಪೂಜಾರಿಯವರಲ್ಲಿ ಬಿಟ್ಟ ಬೆಕ್ಕಿನಮರಿಗಳು ನೆಲ್ಲಿಗುಡ್ಡಗೆ ತಾವಾಗಿಯೇ ಹೋದವಾ? ಅಥವಾ ಪೂಜಾರಿಯವರ ಅತ್ತ
ಅವುಗಳನ್ನು ನೆಲ್ಲಿಗುಡ್ಡಗೆ ಕೊಂಡೋತ್ ಬುಡ್ತ್ ನ್ನಾ? ಏಲ್ಲವೂ ನಿಗೂಢ.
ವಾರದ
ನಂತರ ಸರ್ತ ಆಯಿರೆಯಲ್ಲಿರುವ ಮನೆಯ
ಸೀತಾ ಅಜ್ಜಿ ಹೇಳಿದರು. "ನಿನ ಪುಚ್ಚೆಲ್ ಓಲ್ಲ?!!
ದಾಯ್ತ ಉಪದ್ರಕ್ಕಾ, ಇಡೀ ಪೊಡಿ ದೆತ್ತೋಂತುಲ್ಲ"
ಎಂದಾಗ ಮತ್ತೆ ಅದೇ ಬಾಲಕೃಷ್ಣನ ಕಥೆ!
ಉಪದ್ರ ತಡೆಯಲಾಗದೆ, ಗೋಣಿಯಲ್ಲಿ ಮೀನಿನ ಮುಟ್ಟೆ ಇಟ್ಟು ಹಿಡಿದು ನಂತರ ಪೇಂಟೆಯ ದಾರಿಯಲ್ಲಿ
ಬಿಟ್ಟರಂತೆ!!! ಹಾಗಾದರೆ ನೆಲ್ಲಿಗುಡ್ಡೆಯಿಂದ ಬೆಕ್ಕಿನ ಮರಿಗಳು ತಾವಾಗಿಯೇ ಹೋದವಾ? ಅಲ್ಲ ಕೊಂಡೋತ್ ಬುಡ್ತ್
ನ್ನಾ?!! ಅದೂ ಕೂಡ ನಿಗೂಢ.
ಈಗ ನಮ್ಮ ಬೆಕ್ಕು ಮೂರನೇ
ಗರ್ಭಕ್ಕಾಗಿ ಕಂಠನಿಗಾಗಿ ಕಾಯುತ್ತಿದೆ.ಸಂಬಂಧ ಅಕ್ರಮವಾದರೂ, ಮೊದಲೆಲ್ಲ ಅತ್ತೆಯ ಮನೆಗೆ ಬಂದಂತೆ ರಾಜಾರೋಷವಾಗಿ ಬರುತ್ತಿದ್ದ ಕಂಠ ಈಗ ಈ
ಕಡ ತರೆ ಪಾಡ್ತ್ ಕೂಡಾ
ಮಲಗುವುದಿಲ್ಲ. ಯಾಕೆಂದರೆ ಒಂದು ವಾರದ ಹಿಂದೆ
ನಮ್ಮ ದೂಜ ಕಂಠನಿಗೆ ಕೊಲೆ
ಬೆದರಿಕೆ ಹಾಕಿಬಿಟ್ಟಿದ್ದಾನೆ! ಹೌದು, ಇಂಚಿಪ ಒಮ್ಮ ಕಂಠ ಬಂದಿದ್ದ.
ನನ್ನ ಪೊಪ್ಪ ಹೇಳುವಂತೆ "ರಡ್ಡ್ ಸೇರ್ ಆವು ಮಾಸ;
ಬಹುಶ: ಪೂಜಾರಿಯವರ ಮನೆಯಲ್ಲಿ ಕೋಳಿ ಮೊಟ್ಟೆ ಕದ್ದು
ತಿಂದದ್ದು ಇವನೇ ಬೇಕು, ಚೋಳಿ
ಹರಿಯುಷ್ಟು ಪುಡ್ಕೆನೆ ಇರುವ ಈತ ಮೇಲ್ಛಾವಣಿಯ
ಮೆಟ್ಟಿಲಲ್ಲಿ ನಮ್ಮ ಪುಚ್ಚೆಯೊಂದಿಗೆ ಏಕಾಂತದಲ್ಲಿ
ಇರುತ್ತಿದ್ದ. ನಮ್ಮ ಪುಚ್ಚೆಯ ಅಕ್ರಮ
ಸಂಬಂಧವನ್ನು ಕಣ್ಣಾರೆ ಕಂಡ ನಮ್ಮ ದೂಜ,
"ಕೂಡ್ ತ ಪಡಿ ದೆತ್ತ್0ಡ ನಿನನಿತ್ತೆ ದೀಡುಜಿ
ಮಗ" ಎನ್ನುವಂತೆ ಗೂಡಿನೊಳಗಿಂದ ಸುಯಿಂಪುತಿದ್ದ. ಮೊದಲೇ ಇವರ ಏಕಾಂತದಿಂದ ನೆಮ್ಮದಿ
ಕಳೆದುಕಂಡಿದ್ದ ನಾವು ದೂಜನನ್ನು ಬಂಧಮುಕ್ತಗೊಳಿಸಿದ್ದೇ
ತಡ, ಕಂಠ ಎದ್ನೋ ಬಿದ್ನೋ
ಎಂಬಂತೆ ಓಡಿದ.
ಬಾವಿಯ
ಬಳಿ ಒಂದು ಪಟ್ಟು ತಿಂದ
ಕಂಠ ಇನ್ನು ಕೆಳಗಿದ್ದರೆ ನನ್ನ ಜೀವ ಉಳಿಯುವುದಿಲ್ಲವೆಂದು
ತಿಳಿದು ಕುಟ್ಟಿ ಗೇರ್ ಹಾಕಿದವನೇ ತಂಗಿನಮರಕ್ಕೆ
ಹತ್ತಿ ಕುಬೆಯಲ್ಲಿ ಕೂತ ಕಂಠ, ಅವನ
ಮನೆಗೆ ಹಿಂತಿರುಗುದ್ದು ಬೋಲುಗೇ.ಹಾಗೆ ಹೋದ ಕಂಠ
ಇಂಚಿ ಬರಲೇ ಇಲ್ಲ. ಇತ್ತ
ನಮ್ಮ ಮಂಗು ಕಟ್ಟಪುಣೆಯಲ್ಲಿ ನಿಂತು
ಎಷ್ಟು ಕೂಗಿ ಕರೆದರೂ ಕಂಠನಿಗೆ
ದೂಜನ ಭಯ. 'ಬದ್ಕ್0ಡ
ನಾಲ್ ಮೀನ್ತ ಮುಟ್ಟೆ ಆಂಡ್ಲ ತಿನುವೆ' ಎಂದು ಈಯೆರೆಗೆ ಬರುದೇ
ಇಲ್ಲ.
ವಿರಹ
ವೇದನೆಯ ಮಂಗುವಿನ ಆರ್ತನಾದಕ್ಕೆ ನಮ್ಮ ನೆಮ್ಮದಿ ಹಾಳಾಗಿ,
ಅದಕ್ಕೂ ಕೂಡ ನಿಮೂರ್ತಿ ಮಾಡಬೇಕೆಂದು
ಆಲೋಚನೆ ಮಾಡಿದ್ದೆವು. ಆದರೆ "ಬತ್ತ್ ನ ಪುಚ್ಚೆ ಎಡ್ಡೆ"
ಎಂದು ಅಮ್ಮ ಸುಮ್ಮನಾದರು. ಹಾಗಂತ
ಬತ್ತ್ ನ ಪುಚ್ಚೆ ಎಡ್ಡನಾ?
'ಬಂದ ಬೆಕ್ಕು ಮದುವೆಯ ಊಟ ತಿನ್ನುತ್ತದೆ' ಎಂಬುದು
ಒಂದು (ಮೂಢ)ನಂಬಿಕೆ. ಹಾಗಂತ
ಮರಿಗಳು ಹೋದ ಮೂರು ಮನೆಯವರು
ಯಾಕೆ ಅವುಗಳನ್ನು ಸಾಕಲಿಲ್ಲ ?ಬಹುಶಃ ಅವರಲ್ಲಿ ಎಲ್ಲಾ ಮದುವೆ ಆದವರೇ ಇರಬೇಕು. ಹಾಗಂತ ಬೆಕ್ಕುಗಳು ಯಾರ ಮನೆಗೂ ತಾನಾಗಿಯೇ
ಹೋಗೋದಿಲ್ಲ, ಮದುವೆಯಾದವರ ಮನೆ ಹುಡುಕಿಕೊಂಡು ಹೋಗುವುದಿಲ್ಲ.
ಮರಿಗಳನ್ನು ಬಿಟ್ಟವರು ಉಳಿದವರು ಅವುಗಳನ್ನು ಸಾಕಲು ನೈದ ನಯವಾದ ಸಾಲುಗಳು
ಅವು.
ತನ್ನನ್ನು
ಬಿಟ್ಟ ಜಾಗದಿಂದ ಹತ್ತಿರವಿರುವ ಮನೆಗೆ ಹೋಗಬಹುದು. ಹಾಗಂತ ಭಟ್ಟರ ಮನೆಗೆ ಹೋದರೆ ಸೌತ್ತೆ ಮತ್ತು ಅಲೆಯೇ ಗತಿ! ಈ ಮಂಗು
ನಮ್ಮ ಮನೆಗೆ ಬಂದ ವರ್ಷವೇ ನನ್ನ
ಚಿಕ್ಕಪ್ಪನ ಮದುವೆ ನಡೆದದ್ದು. 'ಇನ್ನೇನು, ಮದುವೆ ಇರುವುದರಿಂದ ಬಂದ ಬೆಕ್ಕನ್ನು ಸಾಕಿಯೇ
ಸಾಕುತ್ತಾರೆ' ಎಂದು ಯಾರಾದರೂ ಇದನ್ನು
ನಮ್ಮ ಮನೆಗೆಂದೇ ಬಿಟ್ಟರಾ? ಮೂಡನಂಬಿಕೆಯ ಸಾಲಿನಲ್ಲಿ ಅಗ್ರಗಣ್ಯವಾಗಿರುವ ಬೆಕ್ಕುಗಳು ಎಷ್ಟು ಬಂಙದಲ್ಲಿ ಜೀವನ ಮಾಡಬೇಕು ಅಲ್ವಾ?
ನನ್ನ ಅಮ್ಮ ಬೆಲ್ಪುಗು ಲಕ್
ನಗ ಮಂಗು ಪ್ರತ್ಯಕ್ಷವಾದರೆ ಮತ್ತೆ
ಮಲಗಿ ಕಾಲು ಗಂಟೆಯ ನಂತರ
ಏಳುತ್ತಿದ್ದರು!
ಹಿಂದೊಮ್ಮೆ
ನಮ್ಮ ಮನೆಯಲ್ಲೊಂದು ನಾಯಿ ಇತ್ತು, ಅದು
ಬಂದ ನಾಯಿ, ನನ್ನ ಅಜ್ಜನೇ ಅದನ್ನು
ತಂದು ಸಾಕಿದರು. ಅವರಿಗೆ ಸಾಕು ಪ್ರಾಣಿಗಳ ಬಗ್ಗೆ
ಅಪಾರ ಪ್ರೀತಿ, ಸಾಕುಪ್ರಾಣಿಗಳನ್ನು ಪ್ರೀತಿಸುವವರು ತಟ್ಟೆಯಲ್ಲಿ ತನ ಬೇಕಾದಕ್ಕಿಂತ ಹೆಚ್ಚಾಗಿ
ಬಡಿಸಿಕೊಳ್ಳುತ್ತಾರೆ. ತಮ್ಮ ಪ್ರೀತಿಪಾತ್ರರಾದ ಅವುಗಳಿಗೆ
ನೀಡಲೆಂದು. ಹೀಗೆ ನಂತರದ ವರ್ಷದಲ್ಲಿ
ಅವರು ಅನಾರೋಗ್ಯದಿಂದ ತೀರಿಹೋದರು. ದಶಕಗಳ ಮೊದಲೇ ಅಸ್ತಮಾ ಅವರನ್ನು ಭಾದಿಸಿತ್ತು. ಅವರು ತೀರಿದೂಡನೆ ಬಂದ
ನಾಯಿಯ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಸಮಾಜ ಎಷ್ಟು ಮೂಢನಂಬಿಕೆಯಲ್ಲಿ
ಮುಳುಗಿದೆಯೆಂದರೆ ನಿರಾಶ್ರಿತ ನಾಯಿ ತನಗೆ ಅನ್ನ
ಇತ್ತವನ ಸಾವಿಗೆ ಹೊಣೆ ಎನ್ನುವಷ್ಟು!!! ಇದು
ನಂಬಿಕೆಯೋ? ಸಂಪ್ರದಾಯವೊ? ಅಲ್ಲ ಸಂಸ್ಕೃತಿಯೋ???
By : -Ashith Rai T ✍️
Bellare